Wednesday, November 27, 2013

LYRICS

ಸಾಹಿತ್ಯ : ಗೌಸ್ ಪೀರ್

ಪಲ್ಲವಿ:

ಈ ನಿನ್ನ ಪ್ರೀತಿಗೆ ಕೊಡಲು ನನ್ನಲ್ಲಿ ಇಲ್ಲವೇ ಬದಲು

ಪ್ರೀತೀಲಿ ನೀ ಗಿರಿ ಸಾಲು ಣಾ ಕೇವಲ ನಿನ್ನಯ ನೆರಳು

ಸಹನೆ ತುಂಬಿ ನೀ ಕಡಲು ಪುಣ್ಯ ನನಗೆ ನೀ ಸಿಗಲು....ಓ ಓ ಓ ||ಪಲ್ಲವಿ||


ಚರಣ:1

ನಿನ್ನ  ಪ್ರೀತಿ ಬಿರುಸಾಯಿತು ಕರಗಿ ನಾನು ಶೀತಲ

ನನಗು ಪ್ರೀತಿ ಅರಿವಾಯಿತು ತೆರೆದೇ ನನ್ನ ಕಂಗಳ 

ಪ್ರೀತಿಯಲ್ಲಿ ಕಲ್ಲು ನಾನು ನೀನು ಹೊಳೆವ ದರ್ಪಣ ||2||


ಇದು ಎಂಥ ಬಂಧನ ಅಪರೂಪ ಕಂಡೆನಾ ||2||



ಚರಣ:2

ಇವಳ ಗುಣಕೆ ಕೈ ಜೋಡಿಸಿ ಮಾಡಲೇ ಪ್ರಶಂಸೆಯ

ಇವಳೇ ಪ್ರೀತಿ ಪ್ರತಿರೂಪವು ಇಲ್ಲಾ ಯಾವ ಸಂಶಯ 

ಇವಳು ಬೆರೆತು ನನ್ನ ಗುರುತು ಪೂರ್ತಿ ಅಳಿಸಿ ಹೋಗಿದೆ ||2||


ನಾನೀಗ ನೂತನ ಬದುಕನ್ನೇ ಕಂಡೆನಾ ||2||

No comments:

Post a Comment

Note: Only a member of this blog may post a comment.